ಪಾರ್‍ಮೆನಿಡೀಸ್
ಕ್ರಿ. ಪೂ. 513. ಪ್ರಾಚೀನ ಗ್ರೀಕ್ ತತ್ವಜ್ಞಾನಿ ಕ್ಸೆನೋಫೆನಿಸ್‍ನ ಶಿಷ್ಯ: ಸಾಕ್ರ್ಯಾಟಿಕ್ ಪಂಥಕ್ಕೂ ಹಿಂದೆ ಇದ್ದ ಈಲೀಯಾಟಿಕ್ ಪಂಥದ ಸ್ಥಾಪಕ. ಹುಟ್ಟಿದ್ದು ದಕ್ಷಿಣ ಇಟಲಿಯ ಈಲೀಯ ಎಂಬ ಸ್ಥಳದಲ್ಲಿ. ಈತನ ಸಿದ್ಧಾಂತದಲ್ಲಿ ಮುಖ್ಯವಾದುದೆಂದರೆ ಬ್ರಹ್ಮತತ್ವ. ಬ್ರಹ್ಮ ನಿರ್ವಿಕಾರ, ಅನಂತ, ಅಚಲ, ಪರಿಪೂರ್ಣ. ಪದಾರ್ಥಗಳ ಯಥಾರ್ಥಜ್ಞಾನ ಇಂದ್ರಿಯಗಳ ಮೂಲಕ ಸಾಧ್ಯವಿಲ್ಲ. ಇಂದ್ರಿಯಗಳ ಮೂಲಕ ನಾವು ಪಡೆಯುವ ಜ್ಞಾನಸಂಶಯ ಮತ್ತು ವಿಪರ್ಯಯ ದೋಷಗಳಿಂದ ಕೂಡಿದ್ದು, ಹೀಗೆಂದು ಈತ ಬೋಧಿಸಿದ. ಈತನ ವಾದದ ಪ್ರಕಾರ ಪದಾರ್ಥಗಳ ಮಾರ್ಪಾಟು ತೋರಿಕೆ ಮಾತ್ರ. ಅವುಗಳ ನಿಜವಾದ ವಾದದ ಪ್ರಕಾರ ಪದಾರ್ಥಗಳ ಮಾರ್ಪಾಟು ತೋರಿಕೆ ಮಾತ್ರ. ಅವುಗಳ ನಿಜವಾದ ಸ್ವರೂಪ ಪರಿಣಾಮತೀತ. ಸತ್ ಒಂದೇ, ಅನೇಕವಾಗಿ ಕಂಡರೆ ಅದು ಕೇವಲ ಭ್ರಮೆ. ಈತನ ವಿಚಾರಧೋರಣೆ ಭಾರತೀಯರ ಅದ್ವೈತ ವಾದವನ್ನು ಹೋಲುತ್ತದೆ. ಈತನಿಗೆ ಹಿಂದೆ ಇದ್ದ ಹೆರಕ್ಲಿಟಸ್ ಎಂಬ ತತ್ವಜಾÐನಿ ಎಲ್ಲವೂ ಕ್ಷಣಿಕವೆಂದೂ ಸತತ ಪರಿಣಾಮವುಳ್ಳದ್ದೆಂದೂ ಬೋಧಿಸಿದುದನ್ನು ಈತ ತೀವ್ರವಾಗಿ ಖಂಡಿಸಿದ್ದಾನೆ.		    (ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ